
ಸಭೆಯನ್ನು ಕುರಿತು ಮಾತನಾಡಿದ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸಮಾಜದಲ್ಲಿ ಗಣ್ಯರನ್ನಾಗಿಸಿ, ಬಾಳ್ಯದ ಬೆಳವಣಿಗೆ ಜೀವನದ ರಹದಾರಿ ಯಾಗಿದ್ದು,ಉತ್ತಮ ಸಮಾಜ ನಿರ್ಮಾಣಕ್ಕೆ ಮುಖ್ಯವಾಗಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದ್ದು. ಅದು ವಿದ್ಯಾಭ್ಯಾಸದ ಮೂಲಕವೇ ಲಭ್ಯ ಎಂದರು.

ಶಾಂತಿ,ಸಹಬಾಳ್ವೆಯಿಂದ ಸಮಾಜದಲ್ಲಿ ತಮ್ಮ, ತಮ್ಮ ಧರ್ಮಾಚರಣೆ ಮಾಡುವುದು ಒಳಿತು. ಪೊಲೀಸರೊಂದಿಗೆ ಭಾಂದವ್ಯ ಬೆಳೆಸಿ ಆಗಿಂದಾಗ್ಗೆ ನಿಮ್ಮೆದುರು ನಡೆಯುವ, ನಡೆಯ ಬಹುದಾದ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ನೀಡಿದಲ್ಲಿ ನಿಮ್ಮ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಸ್ನೇಹಪೂರಕ ಬರವಸೆ ನೀಡಿದರು.
ಸಭೆಯಲ್ಲಿ ಅಮ್ಜದ್ ಪಾಷಾ(ಅಮ್ಮು) ಯಾಕೂಬ್ ಬೇಗ್,ಅಬ್ದುಲ್ ವಹಿದ್, ರಿಯಾಜ್, ಇನಾಯತ್ ಖಾನ್ ಮುಂತಾದವರು ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.





