ಮನೆಜಿಲ್ಲೆ ಸುದ್ದಿನೂತನ ಶಾಲಾ ಕಟ್ಟಡ ಮತ್ತು ಅಂಗನವಾಡಿ ಕೇಂದ್ರ ಉದ್ಘಾಟನೆ.

ನೂತನ ಶಾಲಾ ಕಟ್ಟಡ ಮತ್ತು ಅಂಗನವಾಡಿ ಕೇಂದ್ರ ಉದ್ಘಾಟನೆ.

ದೊಡ್ಡಬಳ್ಳಾಪುರ: ನಗರದ 4 ನೇ ವಾರ್ಡ್‌ನ ವಿನಾಯಕ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಸ್ಟಿಮೊ ಫೈ ಕಂಪನಿಯ 54 ಲಕ್ಷ ರೂಗಳ ಸಿ.ಎಸ್.‌ಆರ್.‌ ಅನುದಾನದಡಿ ನಿರ್ಮಿಸಲಾದ ನೂತನ ಶಾಲಾ ಕಟ್ಟಡ ಮತ್ತು ಅಂಗನವಾಡಿ ಕೇಂದ್ರವನ್ನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ರವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಶ್ರೀ ಧೀರಜ್ ಮುನಿರಾಜ್ ರವರು ಅಸ್ಟಿಮೋ ಫೈ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಉತ್ಕೃಷ್ಟ ಮಟ್ಟದ ನೂತನ ಶಾಲಾ ಕಟ್ಟಡ ಹಾಗೂ ಅಂಗನವಾಡಿ ನಿರ್ಮಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ತಿಳಿಸಿದರು. ಹಾಗೆಯೇ ಹಿಂದೆ ಇದ್ದ ನಗರಸಭಾ ಸದಸ್ಯರು ಮುಂದೆ ಬರುವ ನಗರಸಭೆ ಸದಸ್ಯರೆಲ್ಲರೂ ಸಿ.ಸಿ.ರಸ್ತೆ,ಚರಂಡಿಗಳನ್ನು ನಿರ್ಮಿಸುತ್ತಾರೆ ಆದರೆ ತಮ್ಮ ಅಧಿಕಾರಿಯವಧಿಯಲ್ಲಿ ಜನ ಸದಾಕಾಲವೂ ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಿದಾಗಲೇ ಜನರು ನಮ್ಮಗಳನ್ನು ನೆನೆಯುತ್ತಾರೆ.ಈ ನಿಟ್ಟಿನಲ್ಲಿ ವಾರ್ಡಿನ ನಗರಸಭೆ ಸದಸ್ಯರಾದ ಶ್ರೀಮತಿ ಬಿ.ನಾಗರತ್ನಮ್ಮ ಕೃಷ್ಣಮೂರ್ತಿ ರವರು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಮುಂದೆ ಸಹ ಜನರು ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಲಿ.ಹಾಗೇ ಎಲ್ಲಾ ಬಿಜೆಪಿ ನಗರಸಭೆ ಸದಸ್ಯರು ಉತ್ತಮವಾಗಿ ಮತದಾರರ ಆಶಯಗಳನ್ನು ಉಳಿಯುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದಾರೆ ಇದು ನನಗೆ ವೈಯುಕ್ತಿಕವಾಗಿ ಖುಷಿಯನ್ನು ಕೊಡ್ತಿದೆ.ಹಾಗೇ ವಾರ್ಡಿನಲ್ಲಿ ಏನಾದರೂ ಕೆಲಸ ಕಾರ್ಯಗಳಿದ್ದರೆ ಖಂಡಿತವಾಗಿ ಮಾಡಿ ಕೊಡ್ತಿನಿ.ಬಹಳ ವರ್ಷಗಳಿಂದ ಈ ವಾರ್ಡಿನ ಪಡಿತರ ವಿತರಣೆ ಕೇಂದ್ರ ಇಲ್ಲ.ವಿನಾಯಕನಗರದ ಜನರು ಮಾರುತಿನಗರದ ಪಡಿತರ ಅಂಗಡಿಯಲ್ಲಿ ರೇಷನ್ ಪಡೆಯುತ್ತಿದ್ದು,ಇದರಿಂದಾಗಿ ವಿನಾಯಕನಗರದ ಜನತೆಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂಬುದರ ಬಗ್ಗೆ ವಾರ್ಡಿನ ನಗರಸಭೆ ಸದಸ್ಯರು ನನ್ನ ಗಮನಕ್ಕೆ ತಂದಿದ್ದಾರೆ ಆ ನಿಟ್ಟಿನಲ್ಲಿ ವಿನಾಯಕನಗರದಲ್ಲಿ ಒಂದು ಪಡಿತರ ಕೇಂದ್ರ ತರುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವ ಕೆಲಸ ಮಾಡಿ ವಾರ್ಡಿಗೆ ಒಂದು ಪಡಿತರ ವಿತರಣಾ ಕೇಂದ್ರ ವ್ಯವಸ್ಥೆ ಮಾಡುವೆ ಎಂದರು.ಹಾಗೇ ಈವರೆಗೆ ಶಾಲೆಗೆ ನಗರಸಭೆ ವತಿಯಿಂದ ಖಾತೆಯನ್ನು ಮಾಡದೇ ಇರುವುದರ ಬಗ್ಗೆ ಶಾಲಾ ಶಿಕ್ಷಕರು ಶಾಸಕರ ಗಮನವನ್ನು ಸೆಳೆದಾಗ ಈ ಕೂಡಲೇ ಶಾಲೆ ಹಾಗೂ ಅಂಗನವಾಡಿಗೆ ನಗರಸಭೆ ವತಿಯಿಂದ ಖಾತೆಯನ್ನು ಮಾಡಿ ಕೊಡಬೇಕೆಂದು ಸೂಚಿಸಿದರು.ಇಲ್ಲವಾದರೇ ಸರ್ಕಾರಿ ಜಾಗ ಒತ್ತುವರಿಯಾಗಿ ಅನ್ಯರ ಪಾಲಾಗುತ್ತದೆ ಅದನ್ನು ತಡೆಯ ಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು.

ವಾರ್ಡಿನಲ್ಲಿರುವ ಗಣೇಶ ದೇವಸ್ಥಾನದ ಕಾಂಪೌಂಡ್ ನಿರ್ಮಾಣದ ಬಗ್ಗೆ ಸಾರ್ವಜನಿಕರ ಪ್ರಶ್ನೆ ಗೆ ಖಂಡಿತವಾಗಿ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ನಮ್ಮ ಸಹಕಾರ ಸದಾಕಾಲ ಇರುತ್ತದೆ ಎಂದೂ ತಿಳಿಸಿದರು‌. ನೂತನ ಶಾಲೆಯಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವಂತೆ ಶಿಕ್ಷಕರು ಶ್ರಮವಹಿಸಬೇಕೆಂದೂ ಸೂಚಿಸಿದರು.

ಇದೇ ಸಂಧರ್ಭದಲ್ಲಿ ವಾರ್ಡಿನ ನಗರಸಭಾ ಸದಸ್ಯರಾದ ಶ್ರೀಮತಿ ಬಿ.ನಾಗರತ್ನಮ್ಮ ಕೃಷ್ಣಮೂರ್ತಿ ರವರು ಹಾಗೂ ಅಸ್ಟಿಮೋ ಫೈ ಪ್ರೈವೇಟ್ ಲಿಮಿಟೆಡ್ ಕಂಪನಿಯ ಎಚ್.ಆರ್ ಮನೋಹರ್ ಹಾಗೂ ನಗರಸಭೆ ಪೌರಾಯುಕ್ತರು ಶ್ರೀ ಕಾರ್ತಿಕೇಶ್ವರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರಯ್ಯ ನವರು ಹಾಗೂ ಶಿಶು ಯೋಜನಾಧಿಕಾರಿಗಳಾದ ವಿನೋದ್ ರಾಜ್ ರವರು ಹಾಗೂ ನಗರಸಭೆ ಸದಸ್ಯರಾದ ಬಂತಿ ವೆಂಕಟೇಶ್, ಪದ್ಮನಾಭ, ನವೀನ್,ಸುಧಾರಾಣಿ ಲಕ್ಷ್ಮೀನಾರಾಯಣ್ ಹಾಗೂ ನಿಕಟಪೂರ್ವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿಗಳಾದ ವತ್ಸಲಾ ಜಗನ್ನಾಥ್ ರವರು ಹಾಗೂ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶಾಲಾ ಮಕ್ಕಳು ಸ್ಥಳೀಯ ನಿವಾಸಿಗರು ಉಪಸ್ಥಿತರಿದ್ದರು.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -

Most Popular

Recent Comments